ಖೀವ-
ಸೋವಿಯತ್ ದೇಶದ ಉeóÉ್ಬಕ್ ಸೋವಿಯತ್ ಸಮಾಜವಾದಿ ಗಣರಾಜ್ಯದ ಖೊರೆಜ್ಮ್û ಅಬ್ಲಾಸ್ಟ್‍ನ (ಆಡಳಿತ ವಿಭಾಗ) ಒಂದು ಪಟ್ಟಣ. ಆಮೂದಾರ್ಯ ನದಿಗೆ ಪಶ್ಚಿಮಕ್ಕೆ ಕರಾ-ಕುಂ ಮರುಭೂಮಿಯ ಬಳಿಯ ಓಯಸಿಸ್ ಒಂದರ ಮೇಲಿದೆ. ಹಳೆಯ ಪಟ್ಟಣ ಪ್ರಾಚೀನವಾದುದ್ದು, 10ನೆಯ ಶತಮಾನದ ಅರಬ್ ಭೂಗೋಳಶಾಸ್ತ್ರಜ್ಞರಾದ ಅಲ್-ಇಸ್ತಬ್ರಿ ಮತ್ತು ಅಲ್-ಮಕ್‍ದೆಸಿ ಇದರ ಬಗ್ಗೆ ಉಲ್ಲೇಖಿಸಿದ್ದಾರೆ. ಇದರ ಸುತ್ತಣ ಪ್ರದೇಶ ಖಾನರ ಆಡಳಿತಕ್ಕೊಳಪಟ್ಟಿದ್ದಾಗ (1920ರ ವರೆಗೆ) ಖೀವ ಅದರ ರಾಜಧಾನಿಯಾಗಿತ್ತು. ಇಲ್ಲಯ ಪ್ರಾಚೀನ ಅವಶೇಷಗಳು ತುಂಬ ಕುತೂಹಲಕಾರಿಯಾಗಿವೆ. ಹಳೆಯ ನಗರ ಕುನಿ ಆರ್ಕ್ (ಹಳೆಯ ದುರ್ಗ) ದೀರ್ಘಚತುರಸ್ರಾಕಾರವಾದ ಗೋಡೆಯಿಂದ ಆವೃತವಾಗಿತ್ತು. ಇದಕ್ಕೆ ನಾಲ್ಕೂ ಕಡೆಗಳಲ್ಲೂ ನಾಲ್ಕು ದ್ವಾರಗಳಿದ್ದುವು. 19ನೆಯ ಶತಮಾನದ ನಡುಗಾಲದಲ್ಲಿ ಇದರ ಸುತ್ತಣ ಉಪನಗರಗಳನ್ನೂ ಸೇರಿಸಿ, 10 ದ್ವಾರಗಳುಳ್ಳ ಹೊರಗೋಡೆಗಳನ್ನು ನಿರ್ಮಿಸಲಾಯಿತು. ಆಗ ಹಳೆಯ ನಗರಕ್ಕೆ ಇಷಾನ್ ಕಾಲೆಹ್ (ಹಳೆಯ ಭಾಗ) ಎಂಬ ಹೆಸರು ಬಂತು. ಈಗ ಈ ಭಾಗವನ್ನು ಪುರಾತನ ಸ್ಮಾರಕವೆಂದು ಸಂರಕ್ಷಿಸಲಾಗಿದೆ.

	ಖೀವ್ ನಗರದಲ್ಲಿ ಯಾಂತ್ರೀಕೃತ ಕೃಷಿಯ ಶಾಲೆ, ಕೃಷಿ ಕಾಲೇಜ್, ರೈಲ್ವೆ ಸಂಸ್ಥೆ, ಪುರುಷರ ಮತ್ತು ಮಹಿಳೆಯರ ಬೋಧಕ ಶಿಕ್ಷಣ ಶಾಲೆಗಳು ಮುಂತಾದ ಸಂಸ್ಥೆಗಳಿವೆ. ಹಿಂದಣ ಖಾನರ ಅರಮನೆ ಇದ್ದಲ್ಲಿ ಈಗ ಇತಿಹಾಸ-ಕ್ರಾಂತಿ ವಸ್ತುಸಂಗ್ರಹಾಲಯವುಂಟು. ಹತ್ತಿ ನೂಲುವಿಕೆ, ಇಟ್ಟಿಗೆ ತಯಾರಿಕೆ, ಜಮಖಾನ ತಯಾರಿಕೆ, ಕಸೂತಿ, ಮರಚಿತ್ರಗಾರಿಕೆ ಮುಂತಾದವು ಇಲ್ಲಿಯ ದೊಡ್ಡ ಸಣ್ಣ ಕೈಗಾರಿಕೆಗಳು.	           							(ಬಿ.ಎಸ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ